DiscoverUV ListenS1 EP 130 ತಾಳ್ಮೆ ಯಶಸ್ಸಿನ ಕೀಲಿ ಕೈ | Patience is the key to success
S1 EP 130 ತಾಳ್ಮೆ ಯಶಸ್ಸಿನ ಕೀಲಿ ಕೈ | Patience is the key to success

S1 EP 130 ತಾಳ್ಮೆ ಯಶಸ್ಸಿನ ಕೀಲಿ ಕೈ | Patience is the key to success

Update: 2024-06-03
Share

Description

ಪ್ರತಿಯೊಬ್ಬನಿಗೂ ಸಾಧನೆಯ ಕನಸು ಇರುತ್ತದೆ. ಆದರೆ, ಅದರ ದಾರಿ ತಿಳಿದಿರುವುದಿಲ್ಲ. ಅಡೆತಡೆಗಳಿರುತ್ತವೆ.
ಅವುಗಳಿಗೆ ಹೆದರಬಾರದು. ಕನಸು, ಹಣ ಸಂಪಾದನೆ ಮತ್ತು ಜ್ಞಾನ ಈ ಮೂರು ಹಾದಿಯಲ್ಲಿ ಏಕಕಾಲಕ್ಕೆ
ಚಲಿಸಿದರೆ ಮಾತ್ರ ಚಿಕ್ಕ ವಯಸ್ಸಿನಲ್ಲೇ ಸಾಧಿಸೋ ದಕ್ಕೆ ಸಾಧ್ಯ.
ಪ್ರತಿಯೊಬ್ಬ ಮನುಷ್ಯನಿಗೂ ಏನಾದರೊ ಂದು ಸಾಧಿಸಬೇಕೆಂಬ ಹಂಬಲವಿರುತ್ತದೆ. ಕೆಲವರು ಒಂದು ಡಿಗ್ರಿ
ತೆಗೆದುಕೊಂಡು ಒಂದು ಸಣ್ಣಕೆಲಸಕ್ಕೆ ಕೈತುಂಬ ಸಂಬಳ ತೆಗೆದುಕೊಳ್ಳುವುದೇ ಸಾಧನೆ ಅಂದ್ಕೊ ಳ್ತಾರೆ. ಇನ್ನು
ಕೆಲವರು “ಬೆಳಿಗ್ಗೆ ಒಂಬತ್ತುಗಂಟೆಗೆ ಕೆಲಸಕ್ಕೆ ಹೋ ಗಿ ಸಂಜೆ ಐದು ಗಂಟೆಗೆ ವಾಪಸ್ಸು ಬರುವುದನ್ನು ಎಲ್ಲರೂ
ಮಾಡ್ತಾರೆ, ನಾನು ಸ್ವಲ್ಪ ಡಿಫರೆಂಟಾಗಿರಬೇಕು ಅಂತ ಯೋಚಿಸ್ತಾರೆ. ಅದನ್ನ ಸಾಧಿಸೋ ದಕ್ಕೆ ಬೇರೆ ಬೇರೆ
ಕೆಲಸಗಳಿಗೆ ಕೈ ಹಾಕ್ತಾರೆ.
ಸಾಧನೆಯ ಬಗ್ಗೆಕನಸು ಕಾಣುವುದು ತುಂಬಾ ಸುಂದರವಾದ ವಿಷಯ. ಆದರೆ ಸಾಧಿಸುವುದು ಹೇಗೆ ಎಂಬುದನ್ನು
ವಾಸ್ತವಿಕವಾಗಿ ನಾವು ಯೋಚಿಸುವುದೇ ಇಲ್ಲ. ಯಾರು ಏನು ಬೇಕಾದರೂ ಆಗಬಹುದು, ಯಾವುದೂ ಅಸಾಧ್ಯವಲ್ಲ
ಅನ್ನ ೋದು ನಮಗೆ ಗೊ ತ್ತಿರೋ ವಿಚಾರ. ಆದರೆ ನಮಗೆ ಬೇಕು ಅನ್ನಿಸಿದ್ದರ ಹಿಂದೆ ನೂರಕ್ಕೆ ನೂರು ಶ್ರಮ ಹಾಕಿ
ಓಡಬೇಕು ಅಷ್ಟೆ. ಕೆಲವು ಸಲ ನಾವು ಓಡುವುದಕ್ಕೇನೋ ರೆಡಿ ಇರ್ತೇವೆ, ಆದರೆ ನಮ್ಮ ಜೀವನ, ಆ ಜೀವನದಲ್ಲಿ
ನಮ್ಮ ಸುತ್ತಲಿರುವ ಪ್ರೀತಿಪಾತ್ರರು, ಅವರ ಅಸಹಾಯಕತೆ ಇವೆಲ್ಲನಮ್ಮ ಜೀವನಕ್ಕೆ ತತ್ಕ್ಷಣ ಅದನ್ನೆಲ್ಲಾಜ್ಞಾಪಿಸ ಓಡೋ ದನ್ನ ನಿಲ್ಲಿಸಿಯೇ ಬಿಡುತ್ತೇವೆ. ಪ್ರತಿನಿತ್ಯ ಜೀವನ ಸಾಗಿಸುವುದೇ ಕಷ್ಟ ಅನ್ನಿಸುತ್ತಿರುವಾಗ ಸಾಧನೆಯ ಬಗ್ಗೆ
ಯೋಚಿಸುವುದಾದರೂ ಹೇಗೆ? ಯೋಚಿಸಿದರೂ ಈಗ ಸದ್ಯಕ್ಕೆ ಅದರ ಕಡೆಗೆ ಹೋ ಗುವುದಿಲ್ಲಅಂತ ನಿರ್ಧಾರ
ತೆಗೆದುಕೊಂಡು ಸುಮ್ಮನಾಗುತ್ತೇವೆ.
ಕಷ್ಟದಲ್ಲಿರುವವರು ನಿಜವಾಗಿಯೂ ಏನನ್ನೂ ಸಾಧಿಸಲು ಸಾಧ್ಯವೇ ಇಲ್ಲಅಂತ ಅನ್ಕೊ ಂಡು ಬಿಡುತ್ತೇವೆ. ಆದ್ರೆ
ಇದಕ್ಕೆಲ್ಲಾ ಬೇಕಾಗಿರೋ ದು ತಾಳ್ಮೆ . ಸಾಧಿಸೋ ದಕ್ಕಾಗಿ ನಿಮ್ಮ ತಂದೆ ತಾಯಿಯನ್ನು ದೂರ ಮಾಡಬೇಕಿಲ್ಲ,
ಅಣ್ಣತಂಗಿಯ ಪ್ರೀತಿಯಿಂದ ವಂಚಿತರಾಗಬೇಕಿಲ್ಲ, ಅವರ್ಯಾರನ್ನೂ ನೋ ಡಿಕೊಳ್ಳದೆ ಎಲ್ಲ ಜವಾಬ್ದಾರಿಗಳನ್ನು
ಕಳಚಿಕೊಂಡು ಮನೆ ಬಿಟ್ಟು ಓಡಿಹೋ ಗಬೇಕಿಲ್ಲ. ಒಬ್ಬರಲ್ಲಇಬ್ಬರಲ್ಲ, ಸಾವಿರಾರು ಜನ ಹೀಗೆ ಮನೆ ಬಿಟ್ಟು ಓಡಿ
ಬಂದು ಸಾಧನೆ ಮಾಡುತ್ತೇವೆ ಅಂತ ಸುಮ್ಮನೆ ಕೂತಿದ್ದಾರೆ. ಯಾಕೆ ಸುಮ್ಮನೆ ಕೂತಿದ್ದಾರೆ ಅಂತ ಒಮ್ಮೆ
ಸಿಂಹಾವಲೋ ಕನ ಮಾಡಿದ್ರೆ, ಅದಕ್ಕೆ ಬೇರೆ ಯಾರೂ ಕಾರಣರಲ್ಲ; ಅವರೇ ಕಾರಣರು. ತಾಳ್ಮೆ ಯಿಲ್ಲದ ಬದುಕು.
ಅವರು ತಮ್ಮ ಕಣ್ಮುಂದೆ ಸಾಧನೆ ಮಾಡಿರುವ, ಬಡತನದಿಂದ ಬಂದಿರುವ ಜನರೊ ಡನೆ ತಮ್ಮನ್ನು
ಹೋ ಲಿಸಿಕೊಲುವುದಿಲ್ಲ. ಬದಲಿಗೆ, ಅವರ ಕಣ್ಣಿಗೆ ಈಗಾಗಲೇ ಶ್ರೀಮಂತರು ಕಾಣಿಸಿರ್ತಾರೆ. ತಾನು ಕೂಡ
ಶ್ರೀಮಂತನಾಗಿದ್ದಿದ್ದರೆ ದೊ ಡ್ಡ ಸಾಧನೆ ಮಾಡುತ್ತಿದ್ದೆ ಅಂತ ಗೆಳೆಯರೆದುರು ಕೊಚ್ಚಿಕೊಳ್ಳುತ್ತಾರೆ. ಕೆಲವೊಮ್ಮೆ
ಇದಕ್ಕೆಲ್ಲಾನಮ್ಮ ಮನಸ್ಥಿತಿಯೂ ಕಾರಣವೇನೋ ಅಂತನಿಸಿ ಬಿಡುತ್ತದೆ.
ತಾವು ಕಷ್ಟಪಟ್ಟು ದುಡಿದು ತನ್ನ ಕನಸನ್ನು ನನಸು ಮಾಡಿಕೊಳ್ಳುವ ದಾರಿಯಲ್ಲಿಇದ್ದೇನೆ ನೆಮ್ಮದಿ ಕೂಡ ಅವರಿಗೆ
ಇರದೇ ಇರುವುದು ದುರದೃಷ್ಟಕರ ಸಂಗತಿ. ದಿನಕ್ಕೊಂದು ಹೊ ಸ ಕೆಲಸಕ್ಕೆ ಕೈ ಹಾಕುವುದು, ಕೊನೆಗೆ ಯಾವುದೂ
ಸಾಧ್ಯವಾಗದೇ ತಮ್ಮ ಜೀವನವನ್ನೇ ಬೈದುಕೊಳ್ಳುವುದು. ಸಾವಿರಾರು ಫೈಲ್ಯೂರ್ಗಳ ನಂತರವೂ ಸಾಧಿಸಿ ದಡ
ಸೇರಿದವರೂ ಅದೆಷ್ಟ ೋ ಮಂದಿ ಇದ್ದಾರೆ. ಅವರ ಬದುಕು ನಮಗೆ ಸ್ಫೂರ್ತಿ. ಅಂತಹವರಲ್ಲಿಪ್ರಮುಖರು ಕೆಎಫ್ಸಿ
ಬ್ರ್ಯಾಂಡ್ನ ಸಂಸ್ಥಾಪಕರು. ನೂರು ಫೈಲ್ಯೂರ್ಗಳ ನಂತರವೂ ತನ್ನ ಇಳಿವಯಸ್ಸಿನಲ್ಲಿಒಂದು ಬ್ರ್ಯಾಂಡ್ ಕಟ್ಟಿ
ಮಿಲಿಯನ್ಗಟ್ಟಲೆ ಸಂಪಾದಿಸಿದ ಹೆಸರುವಾಸಿಯಾದವರ ಕಥೆ ಅಂತೂ ನಮಗೆ ಸ್ಫೂರ್ತಿ. ಇವರ ಕಥೆಯನ್ನು
ಬ್ರ್ಯಾಂಡ್ ಸ್ಟ ೋರಿ ಸಿರೀಸ್ನ ಒಂದು ಎಪಿಸೋ ಡ್ನಲ್ಲಿನೀವು ಕೇಳಬಹುದು. ಇಲ್ಲಿನೂರು ಫೇಲ್ಯೂರು ಅನ್ನ ೋದು
ಚಿಕ್ಕ ವಿಚಾರವಂತೂ ಅಲ್ಲವೇ ಅಲ್ಲ, ಈ ಫೇಲ್ಯೂರ್ಗಳನ್ನ ಓವರ್ಕಮ್ ಮಾಡಿರೋ ದಕ್ಕೆ ಪ್ರಮುಖ ಕಾರಣ ತಾಳ್ಮೆ .
ಅದರ ಜೊತೆಗೆ ಪರಿಶ್ರಮವಂತೂ ಖಂಡಿತಾ ಇದೆ.
ಮನುಷ್ಯನಿಗೆ ತಾಳ್ಮೆ ಮುಖ್ಯವಾಗಿ ಬೇಕು. ಇದು ಸಕ್ಸೆಸ್ನ ಪ್ರಮುಖ ಸೂತ್ರವಾಗಿರುತ್ತದೆ. ಈ ದಾರಿ ಬಿಟ್ಟು
ಗೆಲುವಿಗೆ ಬೇರೆ ಯಾವುದು ಅಡ್ಡದಾರಿಗಳಿಲ್ಲ. ಅದಕ್ಕೇ ದೊ ಡ್ಡವರು ಹೇಳಿದ್ದುತಾಳಿದವನು ಬಾಳಿಯಾನು ಅಂತ.
ಯಾವ ವಿಜ್ಞಾನಿಯ ಪ್ರಯೋಗವೂ ಒಂದೇ ಬಾರಿಗೆ ಯಶಸ್ವಿಯಾಗಿಲ್ಲ. ಹತ್ತುಹಲವು ಸೋ ಲುಗಳ ಬಳಿಕವೇ
ಸಾಧಕರು ಯಶಸ್ಸು ಕಂಡಿದ್ದುಅಂತ ಹೇಳ್ತಾಇವತ್ತಿನ ಸಂಚಿಕೆಗೆ ಪೂರ್ಣವಿರಾಮವನ್ನಿಡ್ತಾಇದೀನಿ.



Comments 
In Channel
loading
00:00
00:00
x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

S1 EP 130 ತಾಳ್ಮೆ ಯಶಸ್ಸಿನ ಕೀಲಿ ಕೈ | Patience is the key to success

S1 EP 130 ತಾಳ್ಮೆ ಯಶಸ್ಸಿನ ಕೀಲಿ ಕೈ | Patience is the key to success

UVLISTEN